Sunday, 11 February 2018

ಬ್ರೈನ್ ಟೂಮರ್ ಹುಡುಗಿಯ ಲವ್ ಸ್ಟೋರಿ 💕😘


ಇಂಚರ ಎಂಬ ಹುಡುಗಿ💕😔 ಪವನ್ ಎಂಬ ಹುಡುಗನ್ನ ತುಂಬಾ ವರ್ಷಗಳಿಂದ ಪ್ರೀತಿಸುತಿದ್ದಳು. ಒಂದು ದಿನ ಇಂಚರ ಪವನನಿಗೆ ಹೇಳಿದಳು 'ಇನ್ನೂ ನನ್ನ ಹುಟ್ಟು ಹಬ್ಬಕ್ಕೆ ಎರಡು 😴ತಿಂಗಳು ಇದೆ. 😰ನೀನು ನನ್ನ ಹುಟ್ಟು ಹಬ್ಬಕ್ಕೆ ಯಾವತ್ತು ಮರೆಯಲಾಗದ ಉಡುಗೊರೆ ಕೊಡಬೇಕು" ಅಂತ ಹೇಳ್ತಾಳೆ .... ಅದಿಕ್ಕೆ ಪವನ ಒಪ್ಪಿಗೆ ಸೂಚಿಸುತ್ತಾನೆ.... ಇದಾಗಿ ಮಾರನೆ ದಿನ ಇಂಚರಾಗೆ ಹುಷಾರಿಲ್ಲದೆ ಹಾಸ್ಪಿಟಲ್'ಗೆ ಸೇರಿಸುತ್ತಾರೆ.. ಎಲ್ಲಾ ಪರೀಕ್ಷೆಗಳ ನಂತರ ವೈದ್ಯರು ಅವಳ ಕುಟುಂಬಕ್ಕೆ ಹೇಳುತ್ತಾರೆ "ನಿಮ್ಮ ಮಗಳಿಗೆ ಬ್ರೈನ್ ಟೂಮರ್ ಖಾಯಿಲೆ ಇದೆ, ಬದುಕೋದು ತುಂಬಾ ವಿರಳಾ, ಆದರೆ ನಿಮ್ಮ ಮಗಳಿಗೆ ಯಾರಾದರು 'ಮೆದುಳು' ದಾನ ಮಾಡಿದರೆ ಉಳಿಸಬಹುದು, ಆದರೆ ನೀವು ಎರಡು ದಿನದಲ್ಲಿ ದಾನಿಯನ್ನ ಹುಡುಕಿ ತನ್ನಿ, ಇಲ್ಲಾಂದ್ರೆ ನಿಮ್ಮ ಮಗಳು ಬದುಕುವುದಿಲ್ಲ" ಅಂತ ಹೇಳ್ತಾರೆ. ಅವರ ಕುಟುಂಬದವರು ಎಷ್ಟು ಕಷ್ಟ ಪಟ್ರು ದಾನಿ ಸಿಗಲ್ಲ, ಆಗ ಅವರು ಪೆಚ್ಚು ಮೊರೆ ಹಾಕ್ಕೊಂಡು ಹಾಸ್ಪಿಟಲ್ 'ಗೆ ಬರ್ತಾರೆ.
ಆಗ ವೈದ್ಯರು ಇವರ ಬಳಿ ಬಂದು 'ನಿಮ್ಮ ಮಗಳಿಗೆ ಮೆದುಳು ದಾನ ಮಾಡೋಕೆ ಒಬ್ಬರು ಬಂದಿದ್ದಾರೆ, ಆದರೆ ಅವರನ್ನು ಯಾರು ಭೇಟಿ ಮಾಡಬಾರದು, ಇವಾಗ ನಾವ್ ಆಪರೇಶನ್ ಮಾಡ್ತಿವಿ" ಅಂತ ಹೇಳಿ ಹೋಗ್ತಾರೆ.
ಆಪರೇಶನ್ ಸಕ್ಸಸ್ ಆಗುತ್ತೆ.
ಅವಳು ಸುಧಾರಿಸಿಕೊಳ್ಳೋಕೆ ತಿಂಗಳುಗಳು ಬೇಕಾಗುತ್ತವೆ.
ಇನ್ನೇನು ಹುಟ್ಟು ಹಬ್ಬ ಎರಡು ದಿನ ಇರೋವಾಗ ಅವಳನ್ನ ಡಿಸ್ಚಾಜ್ ಮಾಡ್ತಾರೆ.
ಹೋಗುವಾಗ ವೈದ್ಯರು ಅವಳಿಗೆ ಒಂದು ಪತ್ರ ಕೊಟ್ಟು, ಈ ಪತ್ರ ನಿನಗೆ 'ಮೆದುಳು' ದಾನ ಮಾಡಿದ ವ್ಯಕ್ತಿ ಕೊಟ್ಟಿದ್ದು, ಅದನ್ನ ಹುಟ್ಟು ಹಬ್ಬದ ದಿನವೇ ಓದಬೇಕೆಂದು ಅವನು ಹೇಳಿದ್ದಾನೆ ಅಂತ ಹೇಳ್ತಾರೆ......
ಅವಳ ಹುಟ್ಟುಹಬ್ಬದ ದಿನ ಕುಟುಂಬದವರು, ಸ್ನೇಹಿತರು ಎಲ್ಲರು ಶುಭಾಷಯ ಕೋರುತ್ತಾರೆ.
ಆನಂತರ ಅವಳಿಗೆ ಪವನ ವಿಶ್ ಮಾಡಿಲ್ವಲ್ಲ ಅಂತ ಸಿಟ್ಟು ಬಂದು ಪವನನಿಗೆ ಕಾಲ್ ಮಾಡ್ತಾಳೆ, ಅವನ ಮೊಬೈಲ್ ಸ್ವಿಚ್ ಆಫ್ ಬರುತ್ತೆ, ಅವಳಿಗೆ ಅವನ ಮೇಲೆ ಇನ್ನು ಸಿಟ್ಟು ಜಾಸ್ತಿ ಆಗುತ್ತೆ.
ಬೇಜಾರಾಗಿ ಹೋಗ್ಲಿ ಆ ವೈದ್ಯರು ಕೊಟ್ಟ ಪತ್ರವನ್ನು ಓದೋಣ ಎಂದು, ಅದನ್ನು ಓದುತ್ತಾಳೆ.
ಅದರಲ್ಲಿ "ಹುಟ್ಟು ಹಬ್ಬದ ಶುಭಾಶಯಗಳು" ಗೆಳತಿ, 
ಜೀವನದಲ್ಲಿ ಎಂದೆಂದೂ ಖುಷಿಯಾಗಿರು, ಮಿಸ್ ಯು ಅಂತ ಬರೆದು ಕೊನೆಯಲ್ಲಿ ಇಂತಿ ನಿನ್ನ ಪ್ರೀತಿಯ ಪವನ ಅಂತ ಬರೆದಿರುತ್ತೆ....

ಅದಿಕ್ಕೆ ನಿಮ್ಮ ಲವರ್ ಕಾಲ್ ರಿಸೀವ್ ಮಾಡಿಲ್ಲ ಅಂತ ಕೋಪ ಮಾಡ್ಕೋಳೋಕೆ ಹೋಗಬೇಡಿ, ಅದಕ್ಕೆ ಕಾರಣ ಏನಾದ್ರೂ ಇರಬಹುದು....

ಇಂತಿ ನಿಮ್ಮ ಪ್ರೀತಿ..........

No comments:

ಮಗುವಿಗೆ ಜನ್ಮ ನೀಡಿದ ಮೊದಲ ಗಂಡಸು ಗಂಡಸು - Kannada Focts

2009 ರಂದು ಒಬ್ಬ ಹುಡುಗ ಮಗುವಿಗೆ ಜನ್ಮ ನೀಡಿದ್ದಾರೆ ಇದು ಆಶ್ಚರ್ಯ ಪಡಬೇಕಾದ ವಿಷಯ