ಮಗನು ತನ್ನ ತಾಯಿಯನ್ನು
ಕರೆದುಕೊಂಡು ಪಟ್ಟಣದ ಪ್ರಸಿದ್ಧ
ರೆಸ್ಟೋರೆಂಟ್ ಗೆ ಹೋದನು.👏
ತಾಯಿ ಅತ್ಯಂತ ವೃದ್ದೆ ಅಗಿದ್ದಳು.
ಮಗ ಭೋಜನವನ್ನು ಆರ್ಡರ್
ಮಾಡಿದನು..💕
ಭೋಜನ ಬಂದಿತು.
ತಾಯಿ ಬಹಳ ಬಲಹೀನ ಅಗಿದ್ದರಿಂದ ಊಟ ಮಾಡುವುದಕ್ಕೆ
ಕಷ್ಟವಾಗುತ್ತಿತ್ತು..😔
ಮೇಲೆ ಕೆಳಗೆ ಬಿಳುಸುತ್ತ ಊಟ ಮಾಡುತ್ತಿದ್ದಳು.. ಅ ತಾಯಿ ಊಟ ಮಾಡುವ ಶೈಲಿಯನ್ನು ಕಂಡು ಅಕ್ಕ ಪಕ್ಕದವರು ಚಿಕ್ಕ ಧ್ವನಿಯಲ್ಲಿ ಮಾತನಾಡುತ್ತಾ ತಿನ್ನುವುದಕ್ಕೆ ಆಗುವುದಿಲ್ಲ ಅಂದರೆ ಯಾಕೆ ಹೋಟೆಲ್ ಗೆ ಕರೆದುಕೊಂಡು ಬಂದು ಬೇರೆ ಅವರಿಗೆ ತೊಂದರೆ ಕೊಡಬೇಕು ಎಂದು ಚೂಚ್ಚು ಮಾತುಗಳನ್ನು ಆಡುತ್ತಿದ್ದರು..
ಅದರೆ ಮಗನು ಅವರ ಮಾತುಗಳಿಗೆ
ಕಿವಿ ಕೊಡಲಿಲ್ಲ....
ತನ್ನ ತಾಯಿ ತಿನ್ನುವವರೆಗೆ ನಿಧಾನವಾಗಿ ಕೂತುಕೊಂಡು ತಿಂದ ನಂತರ ತಾಯಿಯನ್ನು ಕರೆದುಕೊಂಡು ಹೋಗಿ ಕೈಗಳನ್ನು
ಮುಖವನ್ನು ತೊಳೆದು ತಲೆಯನ್ನು ಪ್ರೀತಿಯಿಂದ ಬಾಚಿ ಬಟ್ಟೆಗಳ ಮೇಲೆ ಬಿದ್ದ ಆಹಾರವನ್ನು ಸ್ವಚ್ಛ ಗೊಳಿಸಿ ... ಹೋಟಲ್ ಗೆ ಬಿಲ್ಲು ಕಟ್ಟಿ ತಾಯಿಯನ್ನು ಜಾಗ್ರತೆಯಿಂದ
ಕರೆದುಕೊಂಡು ಹೋಗುತ್ತಿರುವಾಗ..
ಒಬ್ಬ ವ್ಯಕ್ತಿ ಈ ತರಹ ಹೇಳಿದನು
ಮಗು ! ನೀನು ಇಲ್ಲಿ ಎನೋ ಬಿಟ್ಟು ಹೋಗುತ್ತಿರುವೆ ನೋಡು ಎಂದು..
ಆ ಯುವಕನು ಹಿಂದಿರುಗಿ ನೋಡಿಕೊಂಡು ಇಲ್ಲ ಸರ್ " ನಾನು
ಏನು ಬಿಟ್ಟು ಹೋಗುತ್ತಿಲ್ಲ " ಎಂದು ಹೇಳಿದನು..
ಆ ವ್ಯಕ್ತಿ ಹೇಳಿದನು ಮಗ " ನೀನು ಬಹಳ ಬೆಲೆ ಬಾಳುವ ವಿಷಯವನ್ನು
ನಮಗೋಸ್ಕರ ಬಿಟ್ಟು ಹೋಗುತ್ತಿರುವೆ " ಈ ಜಗತ್ತಿನಲ್ಲಿ ಪ್ರತಿಯೊಬ್ಬರು ತಮ್ಮ ತಂದೆ ತಾಯಿಗಳನ್ನು ನಿನ್ನ ತರಹ ನೋಡಿಕೊಳ್ಳಬೇಕು ... ಅಸಹ್ಯ ಪಡಲಾರದೆ ವೃದ್ದ ತಂದೆ ತಾಯಿಗಳನ್ನು ಮಕ್ಕಳ ತರಹ ನೋಡಿಕೊಳ್ಳಬೇಕು ಅನ್ನುವ ಅದ್ಭುತ ಸಂದೇಶವನ್ನು ನಮಗೋಸ್ಕರ ಬಿಟ್ಟು ಹೋಗುತ್ತಿರುವೆ " ಆ ಮಾತು ಕೆಳಿದ
ಯುವಕನು ತನ್ನ ತಾಯಿಯ ಹಣೆಗೆ
ಮುತ್ತು ಕೊಟ್ಟು ತಾಯಿಯ ಭುಜದ
ಮೇಲೆ ಕೈ ಹಾಕಿಕೊಂಡು ತಾಯಿಯನ್ನು ಕರೆದುಕೊಂಡು ಮನೆಗೆ ಹೋದನು..
ವೃದ್ಯಾಪ್ಯದಲ್ಲಿ
ತಂದೆ ತಾಯಿಗಳು ಚಿಕ್ಕ ಮಕ್ಕಳು
ಇದ್ದಂತೆ ಅವರನ್ನು ಪ್ರೀತಿಯಿಂದ ಮತ್ತು ಜಾಗ್ರತೆಯಿಂದ ನೋಡಿಕೊಳ್ಳವ ಮಕ್ಕಳು ನಿಜವಾದ
ಮಕ್ಕಳು
No comments:
Post a Comment