Wednesday, 7 February 2018

ಸಾಯುವ ಗಳಿಗೆಯಲ್ಲಿ ಮರೆಯಲಾಗದ ಸಂದೇಶ😔


ದುಃಖದ ಪ್ರೇಮ ಕಥೆ : -😔

ಹುಡುಗಿ : ನಂಗೊಂದು ನಾಯಿ ಮರೀನ ತಂದು ಕೊಡ್ತೀಯಾ?

ಹುಡುಗಿ : ಡ್ಯಾಡಿಗೆ ನಾಯಿಯನ್ನು ಕಂಡರಾಗದು. 
ಅವರಿಗೆ ಇಷ್ಟವೇ ಅಲ್ಲ

ಹುಡುಗ : ಹಾಗಾದರೆ ನಿನ್ನನ್ನು ಆಕಾಶದಲ್ಲು, ನೆಲದಲ್ಲೂ ಇಡದೆ ಮುದ್ದನಿಂದ ನೋಡುತಿದ್ದರಲ್ಲಾ...?

ಹುಡುಗಿ : ಹೋಗು ಮಾತಾಡಬೇಡ. 
ನಾನು ಹೋಗುತ್ತೇನೆ. ಬಾಯ್..

ಹುಡುಗ : ಅಯ್ಯೋ.. 
ನಾನು ಸುಮ್ಮನೆ ತಮಾಷೆ ಗೆ ಅಂದದಲ್ವಾ..? ಸಾರಿ.

ಹುಡುಗಿ : ನೀ ಹೋಗೋ ಮಂಗ

ಹುಡುಗ : ಲೇ ಹೋಗ್ಬೇಡ... 
( ಛೇ.. ಬೇಡವಾಗಿತ್ತು.. ಆ.. ಹೋಗ್ಲಿ ರಾತ್ರಿ ಫೋನಿನಲ್ಲಿ ಸೋಪ್ ಹಾಕಿ ಸರಿ ಮಾಡುವ)

ಮನಸಿನಲ್ಲೇ ಏನೇನೋ ಗೊಣಗುತ್ತಾ ಏನೋ ತೀರ್ಮಾನಿಸಿದವನಂತೆ  ತನ್ನ ಬೈಕ್ ಸ್ಟಾರ್ಟ್ ಮಾಡಿ ಎತ್ತಲೋ ಹೊರಟುಹೋದ.

ಹುಡುಗ: ಲೇ..ನಾಯಿಮರಿ ಸಿಕ್ಕಿತು...
ಹಲೋ! ಹೆಲೋ..?

ಹುಂ ಕಟ್ ಮಾಡಿದಳೇ..?
ಹಾಗಾದರೆ ಇನ್ನು ಮನೆಗೆ ಹೋಗಿ ಕೊಡುವುದೇ ಒಳ್ಳೆಯದು.

ನಾಯಿಮರಿಯನ್ನು ಮಡಿಲಲ್ಲಿಟ್ಟು ಅವನು ಬೈಕ್ ಸ್ಟಾರ್ಟ್ ಮಾಡಿ ಅವಳ ಮನೆಯತ್ತ ಸಾಗಿದ
ಮಳೆ ಸಣ್ಣದಾಗಿ ಸುರಿಯುತಿತ್ತು.
ಲೋ ಪುಟ್ಟ.. ಮಳೆ ಸುರಿಯುತಿದೆಯಲ್ಲ.. 
ನಿನಗೆ ಜ್ವರವೋ ಕೆಮ್ಮೋ ಬಂದಿತೇ..?

ಮಡಿಲಲ್ಲಿದ್ದ ನಾಯಿಮರಿಯ ಮೈದಡವಿಕೊಂಡು ಅವನು ಬೈಕಿನ ಸ್ಪೀಡ್ ಹೆಚ್ಚಿಸಿದ 
ಮಳೆ ಜೋರಾಗಿ ಸುರಿಯಲಾರಂಭಿಸಿತು.
ಕತ್ತಲೆ ತುಂಬಿದ ಆ ದಾರಿಯಲ್ಲಾಗಿ ಅವನು ಮುಂದೆ ಸಾಗುತಿದ್ದ.. 
ಅವಳ ಮನೆಯ ಪಕ್ಕದ ತಿರುವು ತಿರುಗುತಿದ್ದಂತೆ ಪಕ್ಕನೆ ಎದುರಿನಿಂದ ಬಂದ ವಾಹನದ ಲೈಟ್ ಕಣ್ಣಿಗೆ ಬೀಳುತಿದ್ದಂತೆ ಮನಸು ಒಂದು ಕ್ಷಣ ಚಂಚಲವಾಯಿತು.
ಗಾಡಿಯ ಬ್ಯಾಲೆನ್ಸ್ ತಪ್ಪಿತು.
ಒಂದು ದೊಡ್ಡ ಶಬ್ದದೊಂದಿಗೆ ಪಕ್ಕದಲ್ಲಿದ್ದ  ಕರೆಂಟ್ ಕಂಬಕ್ಕೆ ಡಿಕ್ಕಿಯಾಗಿ ನಿಶ್ಚಲವಾಯಿತು.

" ಲೇ.. ನನ್ನ ಬೈಕ್ ಆಕ್ಸಿಡೆಂಟ್ ಆಗಿದೆ, ನಿನ್ನ ಮನೆಯ ಪಕ್ಕದ ತಿರುವಿನಲ್ಲಿ, ಈಗ ಒಂದು ದೊಡ್ಡ ಶಬ್ದ ಕೇಳಿತಲ್ಲಾ ಅದು ನಾನು ಬಿದ್ದದ್ದು, ನನಗೆ ಏಳಲಾಗುತಿಲ್ಲ. 
ಮಳೆಯಲ್ಲಿ ರಕ್ತ ಕೊಚ್ಚಿಹೋಗುತಿದೆ.
ಒಮ್ಮೆ ಇಲ್ಲಿಗೆ ಬರುತ್ತೀಯಾ? ಬೇಗ. 
ನಿನ್ನ ನಾಯಿ ಮರಿಯೂ ಮಳೆಯಲ್ಲಿ ಒದ್ದೆಯಾಗುತಿದೆ. 
ಬೇಗ ಬಾ ಪ್ಲೀಸ್... ನನಗೆ ನೋವು ಸಹಿಸಲಾಗುತಿಲ್ಲ.. ಪ್ಲೀಸ್... ಬೇಗ ಬಾ..
( ಅಳುತ್ತಾ ಅವಳು ಹೊರಗೆ ಓಡಿದಳು.
ಆ ತಿರುವಿನಲ್ಲಿ ಕರೆಂಟ್ ಕಂಬದ ಬಳಿ ಅವನ ಹುಡಿಯಾದ ಬೈಕ್ ಅಙಾಥವಾಗಿ ಬಿದ್ದಿತ್ತು. ಅದನ್ನು ಅಪ್ಪಿ ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಾ ಅಲ್ಲೇ ಬಿದ್ದುಬಿಟ್ಟಳು
ಹಿಂದೆಯೇ ಓಡಿ ಬಂದ ಅವಳ ಡಾಡಿ ಅವಳನ್ನು ಮೇಲಕೆತ್ತಿ ಹಿಂದಕ್ಕೆ ಸಾಗುತಿದ್ದಂತೆ  ಒಂದು ಶಬ್ದ ಕೇಳಿ ತಿರುಗಿ ನೋಡಿದಳು.
ಮಳೆಯಿಂದ ಒದ್ದೆಯಾಗಿ ಅಂಟಿ ಹಿಡಿದ ರೋಮಗಳಿಂದ ಕೂಡಿದ ಒಂದು ಬಿಳಿ ನಾಯಿಮರಿ ಅವಳ ಕಾಲ ಬಳಿ ಬಂದು ಬಾಲವಾಡಿಸುತ್ತಾ ನಿಂತಿತು.. 
ಅದನ್ನು ಎತ್ತಿಕೊಂಡು ಬಿಕ್ಕಳಿಸುತ್ತಾ ಮುಂದೆ ನಡೆದಳು....)

" ಸಾರಿ ಕಣೋ... ನಂಗೆ ಗೊತ್ತಾಗಲಿಲ್ಲ... ನನ್ನನ್ನು ಕ್ಷಮಿಸು...."

( ಆ ಮೆಂಟಲ್ ಆಸ್ಪತ್ರೆಯ ಒಂದು ಕೋಣೆಯಿಂದ ಕೇಳಿ ಬರುತಿದ್ದ ಅವಳ ಅಳು ಮಿಶ್ರಿತ ಶಬ್ದದಿಂದ ಅವಳಿಗೆ ಅವನನ್ನು ಮರೆಯಲು ಸಾಧ್ಯವಾಗುತಿಲ್ಲ ಎಂದು ಸಾಬೀತು ಪಡಿಸುವಂತಿತ್ತು. ಅವನ ಮೇಲಿರುವ ಪ್ರೀತಿಯು,ಇಷ್ಟವೂ ಕೂಗಿ ಹೇಳುತ್ತಿರುವುದು, ಅವನಲ್ಲಿ ಕ್ಷಮಾಪಣೆಯನ್ನು ಕೇಳುವಂತಿತ್ತು....
ಇನ್ನೆಂದು ಬರಲಾರದ ಅವನಿಗಾಗಿ ಅವಳು ಈಗಳು ಕಾಯುತಿದ್ದಾಳೆ..

ಪ್ರಿಯವಾದವರಲ್ಲಿ ಮೂಡುವ ಕೋಪವೂ, ಪ್ರೀತಿಯೂ ಪಕ್ಕನೆ ಮರೆಯಾಗಬಹುದು
ಕೋಪ,ದ್ವೇಷ ಕ್ಕೆ ಹೆಚ್ಚು ಆಯಸ್ಸು ಕೊಡಬಾರದು.......
👉ಪುಟ್ಟ ವೈರ್👈😢😢😢

No comments:

ಮಗುವಿಗೆ ಜನ್ಮ ನೀಡಿದ ಮೊದಲ ಗಂಡಸು ಗಂಡಸು - Kannada Focts

2009 ರಂದು ಒಬ್ಬ ಹುಡುಗ ಮಗುವಿಗೆ ಜನ್ಮ ನೀಡಿದ್ದಾರೆ ಇದು ಆಶ್ಚರ್ಯ ಪಡಬೇಕಾದ ವಿಷಯ