ತಂದೆ ತನ್ನ ಮಗನಿಗೆ ಕೆಲವು ಮೊಳೆಗಳನ್ನು ಕೊಟ್ಟು ನಿನಗೆ ದಿನಕ್ಕೆ ಎಷ್ಟು ಜನರ ಮೇಲೆ ಕೋಪ ಬರುತ್ತದೋ ಅಷ್ಟು ಮೊಳೆಗಳನ್ನು ಗೋಡೆಗೆ ಹೊಡೆ ಎಂದು ಹೇಳುತ್ತಾನೆ.!💞
ಮೊದಲ ದಿನ 20, ಮರುದಿನ 15, ಮೂರನೆಯ ದಿನ 10 ಹೀಗೆ...ತನ್ನ ಕೈಯಲ್ಲಿ 😍ಇರುವಮೊಳೆಗಳೆಲ್ಲವನ್ನೂಗೋಡೆಗೆ 🍁ಹೊಡೆಯುತ್ತಾನೆ ಮಗ.ಮೊಳೆಗಳೆಲ್ಲ ಮುಗಿದ ನಂತರ ಮಗ ತಂದೆಯ ಬಳಿಗೆ ಬಂದು *ಅಪ್ಪ ನೀನು ಕೊಟ್ಟ ಮೊಳೆಗಳೆಲ್ಲ ಮುಗಿದುಹೋದವು ಅನ್ನುತ್ತಾನೆ.**ಓ... ನಿನಗೆ ತುಂಬಾ ಜನರ ಮೇಲೆ ಕೋಪ ಇದೆ ಅಂತ ಆಯ್ತು....!?*ಸರಿ...*ನಾಳೆಯಿಂದ ದಿನವೂ ಕೆಲವು ಮೊಳೆಗಳನ್ನು ಆ ಗೋಡೆಯಿಂದ ತೆಗೆದುಬಿಡು*ಎಂದುತಂದೆ ತನ್ನ ಮಗನಿಗೆ ಹೇಳುತ್ತಾನೆ. ತಂದೆ ಹೇಳಿದ ಹಾಗೇ ಕಷ್ಟಪಟ್ಟು ಗೋಡೆಗೆ ಹೊಡೆದ ಮೊಳೆಗಳನ್ನು ತೆಗೆಯುತ್ತಾನೆ ಮಗ.ಕೆಲವು ಮೊಳೆಗಳನ್ನು ತೆಗೆಯಲು ತುಂಬಾ ಕಷ್ಟಪಡಬೇಕಾಯಿತು.*ಏನಾಯ್ತೋ*? ಅಂತ ಕೇಳುತ್ತಾನೆ ಅಪ್ಪ ಮಗನಿಗೆ. *ನೀವು ಹೇಳಿದ ಹಾಗೇ ಮೊಳೆಗಳೆಲ್ಲವನ್ನುತೆಗೆದು ಬಿಟ್ಟೆ ಅಪ್ಪಾ*ಅನ್ನುತ್ತಾನೆ ಮಗ.*ಮತ್ತೆ ಗೋಡೆ ಹೇಗಿದಿಯೋ?* ಕೇಳುತ್ತಾನೆ ತಂದೆ ಮಗನಿಗೆ.*ಮೊಳೆಗಳನ್ನೇನೋ ತೆಗೆದುಬಿಟ್ಟೆ ಆದರೆ ಅದರಿಂದ ಗೋಡೆಗೆ ಆದ ರಂಧ್ರಗಳು ಹಾಗೇ ಇದ್ದಾವೆ ಅಪ್ಪ ಎಂದ ಮಗ.ಆಗ ತಂದೆ ಮಗನಿಗೆ ನೋಡ್ದಾ....ಮೊಳೆ ಹೊಡೆಯುವಾಗ ಈಜಿ ಯಾಗಿ ಹೊಡೆದು ಬಿಟ್ಟೆ!... ತೆಗೆಯುವಾಗ ತುಂಬಾ ಕಷ್ಟ ಪಟ್ಟೆ.ಮೊಳೆ ತೆಗೆದರೂ ಅದರಿಂದಾದ ರಂಧ್ರಗಳು ಹಾಗೇ ಇವೆ....ಅಂದರೆ ನಮಗೆ ತುಂಬಾ ಜನರ ಮೇಲೆ ಕೋಪ ಬರುತ್ತೆ. ಆ ಕೋಪದಲ್ಲಿ ಅವರ ಮನಸ್ಸನ್ನು ನೋಯಿಸುತ್ತೇವೆ(ಅಂದರೆ ಮೊಳೆ ಹೊಡೆಯುತ್ತೇವೆ) ನಂತರ ಸಾರಿ ಕೇಳುತ್ತೇವೆ(ಅಂದರೆ ಹೊಡೆದಮೊಳೆಗಳನ್ನು ತೆಗೆದುಬಿಡುತ್ತೇವೆ) ಆದರೆ ಸಾರಿ ಹೇಳಿದ ಮಾತ್ರಕ್ಕೆ ಮನಸ್ಸಿಗೆ ಆದ ಗಾಯ (ಗೋಡೆಗೆ ಆದ ರಂಧ್ರಗಳು) ಮಾಸುವುದಿಲ್ಲ.*ಅದಕ್ಕೆ ಮಾತು ಬುಲೆಟ್ ನ ಹಾಗೆ ಮಾತನಾಡುವಾಗ ಯೋಚಿಸಿ ಮಾತನಾಡೋಣ ಇತರರನ್ನು ನೋಯಿಸದ ಹಾಗೆ ಮಾತಾಡೋಣ ಪ್ರೀತಿಯಿಂದ ಮಾತಾಡೋಣ*

No comments:
Post a Comment