ತನ್ನ ಎರಡು ದಿವಸ ಮಾತ್ರ ಪ್ರಾಯವಿರುವ ಮರಿಗೆ ಹಾಲುಣಿಸುತ್ತಿರುವಾಗ ಆ ಜಿಂಕೆಗೆ ಒಂದು ಶಬ್ದ ಕೇಳಿಸಿತು.😔
ಕೂಡಲೇ ತಲೆ ಎತ್ತಿ, ತನ್ನ ಕಿವಿಗಳನ್ನು ನೆಟ್ಟಗೆ ಮಾಡಿ ಆಲಿಸಿತು. ಅವಘಡವನ್ನು ಅರ್ಥ ಮಾಡಿಕೊಂಡ ಆ ತಾಯಿ ಜಿಂಕೆಯು ತಾನು ಹಿಂತಿರುಗಿ ಓಡಿದರೆ ತನ್ನ ಮುದ್ದು ಮರಿಗೆ ಅಪಾಯ ಖಚಿತ ಅಂತ ಅರಿತು ಶಬ್ದ ಕೇಳಿಸಿದ ದಿಕ್ಕಿಗೆ ಓಡಿತು. ಅದು ಆಹಾರ ಹುಡುಕುತ್ತಾ ಬಂದ ಒಂದು ಸಿಂಹವಾಗಿತ್ತು. ಸಿಂಹದ ಮುಂದೆ ತಲುಪಿದ ಆ ಜಿಂಕೆಯು ಮತ್ತೊಂದು ದಿಕ್ಕಿಗೆ ವೇಗವಾಗಿ ಓಡತೊಡಗಿತು. ಸಿಂಹವು ಆ ಜಿಂಕೆಯನ್ನು ಬೆನ್ನಟ್ಟಿ ಓಡಿಸತೊಡಗಿತು.
ಒಮ್ಮೆಲೇ ಆ ಜಿಂಕೆಯು ಸಿಂಹದ ಮುಂದೆ ತಿರುಗಿ ನಿಂತಿತು. ಅದನ್ನು ನೋಡಿದ ಸಿಂಹಕ್ಕೆ ಆಶ್ಚರ್ಯಕರವಾಯಿತು.
ಆ ಜಿಂಕೆಯು ಮುಗುಳ್ನಗುತ್ತಾ ಹೇಳಿತು - ಇನ್ನು ನೀನು ನನ್ನನ್ನು ಕೊಂದು ತಿನ್ನಬಹುದು.
ಏನೋ ಮೋಸ ಇರಬಹುದು ಎಂದು ಸಂಶಯಿಸಿದ ಸಿಂಹವು ಕೇಳಿತು - ಅದ್ಯಾಕೆ ನೀನು ಹಾಗೆ ಹೇಳಿದ್ದು?
ಜಿಂಕೆ - ಏನೂ ಇಲ್ಲ. ನಾನು ನಿನ್ನನ್ನು ನೋಡಿ ಹೆದರಿ ಓಡಿದ್ದಲ್ಲಾ , ಬದಲಾಗಿ ಆ ಜಾಗದಿಂದ ನಿನ್ನನ್ನು ಹಿಂತಿರುಗಿಸಲು ಓಡಿದ್ದು. ಯಾಕೆಂದರೆ ಅಲ್ಲಿ ನನ್ನ ಒಡ ಹುಟ್ಟಿದವರು ಮತ್ತು ನವಜಾತ ಮುದ್ದು ಮರಿ ಇದ್ದಿತು. ಅಲ್ಲಿ ನೀನು ನನ್ನನ್ನು ಕೊಂದರೂ, ನನ್ನ ಮುಂದೆ ನೀನು ಅವರನ್ನು ಕೊಂದು ತಿಂದರೂ ಅದನ್ನು ನೋಡುತ್ತಾ ನಿಲ್ಲಲು ನಮ್ಮಿಂದ ಆಗದು. ಸಾಯುವುದಕ್ಕೆ ನಮಗೆ ಭಯವಿಲ್ಲ. ಆದರೆ ಸಾವಿಗಿಂತಲೂ ನೋವಿನದ್ದಾಗಿದೆ ನಮಗೆ ಆ ದೃಶ್ಯ . ಈಗ ನಾನು ತುಂಬು ಮನಸಿನಿಂದ ಹೇಳುತ್ತಿದ್ದೇನೆ ನೀನು ನನ್ನನ್ನು ತಿನ್ನಬಹುದು. ಇಲ್ಲಿ ನೀನು ಮತ್ತು ನಾನು ಮಾತ್ರ ಇರುವುದು....
ನೀನು ಒಂದು ನಿಮಿಷ ಬೇಗ ನನ್ನನ್ನು ತಿಂದರೆ ನನಗೆ ಅಷ್ಟು ಸಮಯದ ಕಾಯುವಿಕೆ ಕಡಿಮೆಯಾಗುತ್ತೆ.
ಮತ್ತೆ ಒಂದು ವಿಷಯ - ನೀನು ನನಗೆ ಒಂದು ಸಹಾಯವನ್ನು ಮಾಡಬೇಕು. ನೀನು ಹೋಗುವ ದಾರಿಯಲ್ಲಿ ನನ್ನ ನವಜಾತ ಮರಿ ಇದೆ. ಅದನ್ನು ಕೂಡಾ ನೀನು ತಿನ್ನಬೇಕು. ಅದು ಹಾಲನ್ನು ಮಾತ್ರ ಕುಡಿಯೋದು. ಅದಕ್ಕೆ ಹಾಲುಣಿಸಲು ನಾನಿಲ್ಲದಿದ್ದರೆ, ಅದು ಹಸಿವಿನಿಂದ ಬಳಲಿ ಬಳಲಿ ಸಾಯುತ್ತೆ. ಅದನ್ನು ನನ್ನಿಂದ ಸಹಿಸೋದಕೆ ಆಗುವುಲ್ಲ. ಆದ್ದರಿಂದ ಅದನ್ನು ಕೂಡಾ ಕೂಡಲೇ ಕೊಂದು ತಿನ್ನಬೇಕು. ಇದು ನನ್ನ ಕೊನೆಯ ಆಸೆಯಾಗಿದೆ.
ಜಿಂಕೆಯ ಮಾತನ್ನು ಕೇಳಿ ಆ ಸಿಂಹದ ಮನಕರಗಿತು.
ಅದು ಹೇಳಿತು - ನಾನು ನಿನ್ನನ್ನು ತಿನ್ನಲು ಬಂದಿದ್ದು ನಿಜ. ಆದರೆ ನಾವು ಸಿಂಹಗಳ ಒಂದು ಅಭ್ಯಾಸವೇನೆಂದರೆ , ಹಸಿವು ಆಗುವುದಕ್ಕಿಂತ ಮುಂಚೆನೇ ಆಹಾರ ಹುಡುಕುತ್ತೇವೆ. ಆದರೆ ಮಾತ್ರ ನಮಗೆ ಹಸಿವಾಗುವಾಗ ಆಹಾರ ಸಿಗೋದು.
ಇದೀಗ ನನಗೆ ಹಸಿವಾಗುವುದಕ್ಕಿಂತ ಮುಂಚೆನೇ ನೀನು ನನಗೆ ಸಿಕ್ಕಿದ್ದೀಯಾ... ಹಸಿವಿಲ್ಲದ ನಾನು ನಿನ್ನನ್ನು ಹೇಗೆ ತಿನ್ನಲಿ? ಅಂತ ಹೇಳುತ್ತಾ ಆ ಸಿಂಹವು ಅಲ್ಲಿಂದ ಹೊರಟು ಹೋಯಿತು.
ಆ ಜಿಂಕೆಯು ಸಿಂಹ ಕಣ್ಮರೆಯಾಗುವವರೆಗೂ ಆ ದೊಡ್ಡ ಮನಸನ್ನು ನೋಡುತ್ತಾ ನಿಂತಿತು...
ಕೂಡಲೇ ಎಲ್ಲಿಂದಲೋ ಒಂದು ಬಾಣವು ಅದರ ದೇಹವನ್ನು ಹೊಕ್ಕಿತು. ನೋವಿನಿಂದ ಚಡಪಡಿಸಿದ ಜಿಂಕೆಯು ಅದು ಯಾರೆಂದು ನೋಡಿತು .... ಅದು ಒಬ್ಬ ಮನುಷ್ಯನಾಗಿದ್ದ....
ಆತನ ತೋಳಲ್ಲಿ ನಾಲ್ಕೂ ಕಾಲುಗಳನ್ನು ಬಂದಿಸಿದ ತನ್ನನ್ನೇ ನೋಡುತ್ತಿರುವ ತನ್ನ ಮುದ್ದು ಮರಿ....
ತಾನು ಏನನ್ನು ನೋಡದಿರಲು ಬಯಸಿದೆನೋ ಅದನ್ನೇ ಕಂಡ ಆ ಜಿಂಕೆಯು ಸಾಯುವುದಕ್ಕೆ ಮುಂಚೆ ಕೂಗಿ ಹೇಳಿತು -
ಕ್ರೂರನಾದ ಮನುಜನೇ ಕ್ರೂರ ಪ್ರಾಣಿ ನಿನಗಿಂತಲೂ ಎಷ್ಟೋ ಮೇಲು...
ಓ ಮನುಜನೇ ನೀನೆಷ್ಟು ಕ್ರೂರ.... ನೀನೆಷ್ಟು ಕ್ರೂರ...
ಆ ಜಿಂಕೆಯು ನರಳುತ್ತಾ ಪ್ರಾಣ ಬಿಟ್ಟಿತು....
ಮುಂಜಾನೆಯ ವಂದನೆಗಳು ಸ್ನೇಹಿತರೆ.... ಶುಭದಿನ...